ಕೆ.ಎಂ ಬೀನಮೋಳ್ ಭಾರತದ ಅಂತರಾಷ್ಟೀಯ ಮಹಿಳಾ ಕ್ರೀಡಾಪಟು. ಕೆ.ಎಂ ಬೀನಮೋಳ್ ಎಂದೇ ಜನಪ್ರಿಯ.ಇವರು ಕೇರಳದ ಇಡುಕ್ಕಿ ಜಿಲ್ಲೆಯವರು. === ವೈಯಕ್ತಿಕ ಮಾಹಿತಿ === ಕೆ.ಎಂ. ಬೀನಮೋಳ್ ಭಾರತದ ರಾಷ್ರ್ಟೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಹುಟ್ಟಿದ್ದು ಆಗಸ್ಟ್ ೧೫,೧೯೭೫ ಬಿಡಂಜಲ್, ಇಡುಕ್ಕಿ ಜಿಲ್ಲೆ ಕೇರಳದಲ್ಲಿ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇವರ ಸಂಗಾತಿ ಡಾ.ವಿವೇಕ್ ಜಾರ್ಜ್. === ಕ್ರೀಡೆ === ದೇಶ-ಭಾರತ ಕ್ರೀಡೆ-ಟ್ರ್ಯಾಕ್ ಮತ್ತು ಕ್ಷೇತ್ರ ಸ್ರ್ಪಿಂಟ್ -(400ಮೀ) ಮಧ್ಯ-ದೂರ(800 ಮೀ) 4x400 ತರಬೇತುದಾರ-ರಾಜು ಪಾಲ್ === ಸಾಧನೆಗಳು ಮತ್ತು ಶೀರ್ಷಿಕೆಗಳು === ವೈಯಕ್ತಿಕ ಸಾಧನೆಗಳು- 400ಮೀ 51.21 (ಕೀವ್ 200) 800ಮೀ .2;02.01 ನವದೆಹಲಿ 2002 4x400ಮೀ ರಿಲೆ 3:26.89 ಅಥೆನ್ಸ್ ,2004 ಎನ್.ಆರ್ === ಅಥ್ಲೆಟಿಕ್ಸ್ ವೃತ್ತಿಪರತೆ === ಬೀನಮೋಳ್ ತನ್ನ ಸಹೋದರ ಕೆ.ಎಂ ಬಿನು ಅವರೊಂದಿಗೆ ಪ್ರಮುಖ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಒಡಹುಟ್ಟಿದವರು ಎಂದು ಇತಿಹಾಸ ನಿರ್ಮಿಸಿದರು.ಪುರುಷರ 800ಮೀ ನಲ್ಲಿ ಬಿನು ಬೆಳ್ಳಿ ಪದಕ ಗೆದ್ದರು. === ಒಲಂಪಿಕ್ === 2000ಸಿಗೆ ಒಲಂಪಿಕ್ಸ್ ಸೆಮಿಫೈನಲ್ಸ್ ಗೆ ಪಿ.ಟಿ.ಉಷಾ ಮತ್ತು ಶೈನಿ ವಿಲ್ಸನ್ ನಂತರ ಭಾರತದಲ್ಲಿ ಮೂರನೇಯ ಮಹಿಳೆಯಾಗಿ ಆಯ್ಕೆಯಾದರು. 1984 ಗೆ ಒಲಂಪಿಕ್ಸ್ನಲ್ಲಿ 400ಮೀ ಮತ್ತು 800ಮೀಅಡಚಣೆಗಳ ಜಿಗಿತದಲ್ಲಿ ಸಾಧನೆ ಮಾಡಿದವರು. === ಏಷ್ಯಯನ್ ಆಟಗಳು === 2002 ಬುಸನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 800ಮೀ 4x400 ಚಿನ್ನದ ಪದಕವನ್ನು ಪಡೆದರು. === ಸಾಧನೆಗಳು === ೨೦೦೦- ಏಷ್ಯನ್ ಚಾಂಪಿಯನ್ ಶಿಪ್- ಜಕಾರ್ತಾ ಮತ್ತು ಇಂಡೋನೆಷ್ಯಾದಲ್ಲಿ ನಡೆದ ಆಟಗಳಲ್ಲಿ ೧ ಚಿನ್ನದ ಪದಕ ಮತ್ತು ೨ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ೨೦೦೨ ರ ಏಷ್ಯಾನ್ ಗೇಮ್ಸ್ - ಬುಸಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆದ ಆಟಗಳಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ ೨೦೦೪ ರಲ್ಲಿ ಅಥೆನ್ಸ್ ಮತ್ತು ಗ್ರೀಸ್ಸ್ ನಲ್ಲಿ ನಡೆದ ಒಲಂಪಿಕ್ ಆಟಗಳಲ್ಲಿ ೬ನೇ ಸ್ಥಾನವನ್ನು ಪಡೆದಿದ್ದಾರೆ. === ಪ್ರಶಸ್ತಿಗಳು === ಅಥ್ಲಟಿಕ್ ವೃತ್ತಿ ಜೀವನದಲ್ಲಿ ಆದರ್ಶಪ್ರಾಯ ಸಾಧನೆ ಮಾಡಿದ್ದಕ್ಕಾಗಿ ಬೀನಮೋಲ್ ಗೆ 2000 ಅರ್ಜುನ ಪ್ರಶಸ್ತಿ ನೀಡಲಾಯಿತು. 2002-2003 ಭಾರತದ ಅತ್ಯುನ್ನತ ಕ್ರೀಡಾ ಗೌರವ, ರಾಜೀವ್ ಗಾಂಧಿ ಪ್ರಶಸ್ತಿಯನ್ನು ಅಂಜಲಿ ವೇದ್ ಪಾಠಕ್ ಭಾಗವತ್ ಅವರೊಂದಿಗೆ ಜಂಟಿಯಾಗಿ ಪ್ರಶಸ್ತಿಯನ್ನು ಪಡೆದರು. ೨೦೦೪ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. === ವೈಯಕ್ತಿಕ ಜೀವನ === ಕೆ.ಎಂ ಬೀನಮೋಳ್ ಅವರು ಡಾ.ವಿವೇಕ್ ಜಾರ್ಜ್ ಅವರನ್ನು ವಿವಾಹವಾದರು. ಅಶ್ವಿನ್ ಮತ್ತು ಹೈಲೆ ಎಂಬ ಇಬ್ಬರು ಮಕ್ಕಳಿದ್ದಾರೆ. == ಉಲ್ಲೇಖಗಳು ==